ಗ್ರಾಹಕನಿಂದ ಉತ್ಪಾದಕರ ಕಡೆಗೆ ಯೋಜನೆಯಲ್ಲಿ ಗ್ರಾಹಕನೇ ಹಂತ ಹಂತವಾಗಿ PIN Code ಮಟ್ಟದಿಂದ ಪ್ರಾರಂಭಿಸಿ ರಾಜ್ಯಮಟ್ಟದಲ್ಲಿ ಉತ್ಪಾದಕನನ್ನಾಗಿ ಮಾಡುವ ಯೋಜನೆ. ಈ ಯೋಜನೆಯು ಪ್ರಾಥಮಿಕವಾಗಿ ಮತಗಟ್ಟೆಮಟ್ಟದಿಂದ ಪ್ರಾರಂಭಿಸಲಾಗುವುದು. ಒಂದು ಮತಗಟ್ಟೆಗೆ ಒಬ್ಬೊಬ್ಬ ಮತಗಟ್ಟೆ ಮಟ್ಟದ ಕಾರ್ಯಕರ್ತರನ್ನು (BLW) ಗುರುತಿಸುವುದು. ನಂತರ PIN Code ಮಟ್ಟದಲ್ಲಿ ಸಂಚಾಲಕರನ್ನು (PLC) ಗುರುತಿಸುವುದು ಎರಡನೇ ಹಂತ. ಮತಗಟ್ಟೆ ಮಟ್ಟದ ಕಾರ್ಯಕರ್ತನಿಗೆ ಮಾಸಿಕ ಸಂಭಾವನೆ ₹10,000 ರಿಂದ ₹20,000 ನೀಡಲಾಗುವುದು. PLC ಗೆ ಮಾಸಿಕ ಸಂಭಾವನೆ ₹20,000 ರಿಂದ ₹40,000 ನೀಡಲಾಗುವುದು. ವಿಭಾಗದ ಮಟ್ಟದಲ್ಲಿ ಅಂದರೆ ಜಿಲ್ಲಾ ಮಟ್ಟದಲ್ಲಿ 33 DLC ಗಳು (ಮಾಸಿಕ ಸಂಭಾವನೆ ₹40,000 ರಿಂದ ₹70,000). ರಾಜ್ಯ ಮಟ್ಟದಲ್ಲಿ SLC (ಮಾಸಿಕ ಸಂಭಾವನೆ ₹70,000 ರಿಂದ ₹1,00,000).
ಚುನಾವಣೆ ಮತಗಟ್ಟೆಯ ಪಟ್ಟಿಯಲ್ಲಿನ ಮನೆಗಳನ್ನು ಮತ್ತು ಮನೆಯ ಗೃಹಣಿಯರನ್ನು ಗುರುತಿಸಿ ಅವರ ಸಂಚಾರಿ ದೂರವಾಣಿ ಸಂಖ್ಯೆಯನ್ನು ಪಡೆಯುವುದು.
ಆ ಮನೆಗ ಬೇಕಾದ ದೈನಂದಿನ, ವಾರದ ಮತ್ತು ಮಾಸಿಕ ಅವಶ್ಯಕತೆಗಳ ಮಾಹಿತಿ ಸಂಗ್ರಹಿಸುವುದು
ಸಂಗ್ರಹಿಸಿದ ಮಾಹಿತಿಯನ್ನು PLC ಗೆ ಕೊಡುವುದು
ವ್ಯಾಪ್ತಿಯಲ್ಲಿ ಬರುವ ಕುಟಂಬದ ಕಾಳಜಿ ವಹಿಸುವುದು, ಅವರಿಗೆ ಬೇಕಾದ ಮಾಹಿತಿ ಒದಗಿಸುವುದು
ವ್ಯಾಪ್ತಿಯಲ್ಲಿ ಬರುವ ಕುಟಂಬಗಳ ಸಮೀಕ್ಷೆ ನಡೆಸುವುದು
ವ್ಯಾಪ್ತಿಯಲ್ಲಿ ಬರುವ ಸುದ್ದಿಗಳನ್ನು ಸಂಗ್ರಹಿಸುವುದು